Friday, May 28, 2010

ನನ್ನವಳು -ಬಾವ ಗೀತೆ

ಕನಸಿನ ಕದತೆರೆದು
ನೆಟ್ಟಿರುಳು ನೀ ಬಂದೆ
ಹೊಂಬೆಳಕನ್ನು ಚೆಲ್ಲಿ
ನನ್ನ ಹೃದಯದರಮನೆಗೆ

ಈ ಕತ್ತಲು ಹಾಲಿನಂತೆ
ನೀ ಇದ್ದರೆ ನನ್ನ ಬಾಳಿನಲ್ಲಿ
ಹೋಳಿಗೆಗೆ ತುಪ್ಪ ಸುರಿದಂತೆ
ಯುಗಾದಿಯ ಹಬ್ಬದಲಿ

ನೀ ಹಿಡಿದು ಬಂದೆ
ಕೈಯಲ್ಲಿ ಹೂ ಮಾಲೆ
ಘಮಘಮನೆ ಪ್ರೀತಿ ಹೊಮ್ಮಿ
ಅರಳಿತ್ತು ನನ್ನಲ್ಲಿ ಸುವ್ವಾಲೆ

ನೀ ಬಂದ ದಿನದಿಂದ
ಮನಸ್ಸಿಗೆಲ್ಲ ಆನಂದ
ನೀ ಬಂದೆ ಕನಸಿನಾಳದಿ

ಹೊಮ್ಮಿದೆ ಮನಸ್ಸಿನೆತ್ತರದಿ

ಬೇಸಾರವಿನ್ನೇಕೆ ನಲ್ಲೆ
ನಾನಿಲ್ಲವೇ ನಿನ್ನ ಮನದಲ್ಲೇ

Wednesday, May 19, 2010

ನಮ್ಮ ಜನಗಳು

ಆತ್ಮೀಯರೇ, 'ಅಂಕ' ಸಾಂಸ್ಕೃತಿಕ ಅಭಿವೃದ್ದಿ ಸಂಸ್ಥೆಯು ' ಬರ್ತಾರಪ್ಪೋ ಬರ್ತಾರೋ ನನ್ನ ಜನಗಳು' ಎಂಬ ಸಾಂಸ್ಕೃತಿಕ ಸಮಾರಂಭವನ್ನು ಆಯೋಜಿಸಿದ್ದಾರೆ.
ದಯಮಾಡಿ ಸ್ನೇಹಿತರೊಂದಿಗೆ ಬನ್ನಿ..
ಮೇ- 22 ರ ಬೆಳಿಗ್ಗೆ 10.30 ಕ್ಕೆ ಖ್ಯಾತ ಕಲಾವಿದ ಅಪ್ಪಗೆರೆ ತಿಮ್ಮರಾಜು 'ಗೀತ ಗಾಯನ ತರಬೇತಿ ಕಾರ್ಯಕ್ರಮ' ಉದ್ಘಾಟಿಸುವರು. 1.30 ಕ್ಕೆ ನಾಡಿನ ಯುವ ಗಾಯಕರಿಂದ ಗೀತ ಗಾಯನ.. 3.00 ಗಂಟೆಗೆ ಎಸ್.ಜಿ.ಸಿದ್ಧರಾಮಯ್ಯನವರ ಅಧ್ಯಕ್ಷತೆಯಲ್ಲಿ ವಿಚಾರ ಸಂಕಿರಣ..
ವಿಷಯ ಮಂಡನೆ: ಬಂಜಗೆರೆ ಜಯಪ್ರಕಾಶ್, ಡೊಮಿನಿಕ್
ಸಂಜೆ 5.30 ಕ್ಕೆ ಶ್ರೀನಿವಾಸ ಕಪ್ಪಣ್ಣ ಅಧ್ಯಕ್ಷತೆಯಲ್ಲಿ ಸಮಾರೋಪ....ಅಥಿತಿಗಳು: ಮಂಜುನಾಥ ಅದ್ದೆ, ಮಾವಳ್ಳಿ ಶಂಕರ್, ಎನ್.ಆರ್. ಪ್ರಭು..
ಸ್ಥಳ: ಸಚಿವಾಲಯ ಕ್ಲಬ್ , ಕಬ್ಬನ್ ಪಾರ್ಕ್, ಎಂ.ಎಸ್.ಬಿಲ್ಡಿಂಗ್ ಎದುರು, ಬೆಂಗಳೂರು
ತಮ್ಮ ನಿರೀಕ್ಷೆಯಲ್ಲಿ
ಸಬ್ಬನಹಳ್ಳಿ ರಾಜು ಕಾರ್ಯದರ್ಶಿ ಅಂಕ ಸಂಸ್ಥೆ
9448264921

ನಮ್ಮ ಜನಗಳು