Friday, May 28, 2010

ನನ್ನವಳು -ಬಾವ ಗೀತೆ

ಕನಸಿನ ಕದತೆರೆದು
ನೆಟ್ಟಿರುಳು ನೀ ಬಂದೆ
ಹೊಂಬೆಳಕನ್ನು ಚೆಲ್ಲಿ
ನನ್ನ ಹೃದಯದರಮನೆಗೆ

ಈ ಕತ್ತಲು ಹಾಲಿನಂತೆ
ನೀ ಇದ್ದರೆ ನನ್ನ ಬಾಳಿನಲ್ಲಿ
ಹೋಳಿಗೆಗೆ ತುಪ್ಪ ಸುರಿದಂತೆ
ಯುಗಾದಿಯ ಹಬ್ಬದಲಿ

ನೀ ಹಿಡಿದು ಬಂದೆ
ಕೈಯಲ್ಲಿ ಹೂ ಮಾಲೆ
ಘಮಘಮನೆ ಪ್ರೀತಿ ಹೊಮ್ಮಿ
ಅರಳಿತ್ತು ನನ್ನಲ್ಲಿ ಸುವ್ವಾಲೆ

ನೀ ಬಂದ ದಿನದಿಂದ
ಮನಸ್ಸಿಗೆಲ್ಲ ಆನಂದ
ನೀ ಬಂದೆ ಕನಸಿನಾಳದಿ

ಹೊಮ್ಮಿದೆ ಮನಸ್ಸಿನೆತ್ತರದಿ

ಬೇಸಾರವಿನ್ನೇಕೆ ನಲ್ಲೆ
ನಾನಿಲ್ಲವೇ ನಿನ್ನ ಮನದಲ್ಲೇ

1 comment:

  1. ಪದ್ಯ ಚೆನ್ನಾಗಿದೆ.. ನಿಮಗೆ ಈ ಕಾಲದಲ್ಲೂ ಪ್ರೇಮ ಗೀತೆ ಬರೆಯುವ ಸ್ಫೂರ್ತಿ ನೀಡಿದ್ದು ಯಾರೋ...? ಆದರೆ ಥಿಯೇಟರ್ ಮಿರೆರ್ ಪದ್ಯಕ್ಕೆ ಹೋಲಿಸಿಕೊಂಡರೆ ಇದು ಕೊಂಚ 'ತೆಳು' ಆಯ್ತೇನೋ ಅನ್ಸುತ್ತೆ.... ನೀವು ಪದ್ಯ ಬರೆಯುವಾಗ ಅದರ ದಾರಿಯಲ್ಲಿ ಮುಂದುವರೆದರೆ ಚೆಂದ...

    ReplyDelete